ಸಾಧನೆ & ಕೊಡುಗೆ

“ತನ್ನ ಎಳವೆಯಿಂದಲೇ ಹರ್ಷಚಿತ್ತದಿಂದ ಯಕ್ಷಗಾನದತ್ತ ಆಕರ್ಷಿತರಾಗಿ ದಾಪುಗಾಲಿನೊಂದಿಗೆ ಹೆಜ್ಜೆಹಾಕುತ್ತಾ , ಯಕ್ಷರಂಗದ ದಿಗ್ಗಜರೊಂದಿಗೆ ಸ್ನೇಹ ಸೌಹಾರ್ದ ಭಾವಚಿಮ್ಮುವ ಮುಖೇನ, ಕರಾವಳಿಯ ಗಂಡುಗಲೆ ಯಕ್ಷಗಾನದ ಹೆಸರನ್ನು ಹಚ್ಚ ಹಸಿರಾಗಿಸುವ ಸಂಕಲ್ಪ ಹೊತ್ತು, ತನ್ನ ಪ್ರಬಲ ಇಚ್ಛಾಶಕ್ತಿಯ ಮೂಲಕ 'ಯಕ್ಷಮಾತೆ'ಯ ಸೇವಾ ಕೈಂಕರ್ಯದಲ್ಲಿ ತೊಡಗಿ ಮುನ್ನಡೆಯುತ್ತಿರುವ ವಿಶಿಷ್ಟ, ಅಪೂರ್ವ ವ್ಯಕ್ತಿತ್ವ ಶ್ರೀ ನರೇಶ ಡಿ. ಶೆಟ್ಟಿಯವರದು.”

ಇವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕೇಣಿಯವರು. ಇವರ ಯಕ್ಷರಂಗಾಸಕ್ತಿಗೆ ಇವರ ತಂದೆ ರಂಗಭೂಮಿ ಕಲಾವಿದರಾದ ಶ್ರೀ ದುರ್ಗಪ್ಪ ಶೆಟ್ಟಿಯವರೇ ಮೂಲ ಕಾರಣ ಹಾಗೂ ಪ್ರೇರಣೆ ಎಂದರೆ ಅತಿಶಯೋಕ್ತಿಯಾಗಲಾರದು. ಹಲವಾರು ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ಹಾಗೂ ಹವ್ಯಾಸಿ ಯಕ್ಷಗಾನ ತಂಡಗಳಲ್ಲಿ ವೀರರಸ ಪ್ರಧಾನ ಪಾತ್ರ ಮುಖೇನ ಜನಮಾನಸದಲ್ಲಿ ಇಂದಿಗೂ ಹಚ್ಚಹಸಿರಾಗಿರುವ ಶ್ರೀ ದುರ್ಗಪ್ಪ ಶೆಟ್ಟಿಯವರ ಪಾತ್ರ ವೈಶಿಷ್ಟತೆಯ ಅನನ್ಯತೆ, ಸಂಘಟನಾ ಚಾತುರ್ಯ, ಯಕ್ಷಗಾನದ ಅಪ್ಪಟ ಅಭಿಮಾನವನ್ನು ನಾವು ಅವರ ವರಪುತ್ರ ಶ್ರೀ ನರೇಶ ಡಿ. ಶೆಟ್ಟಿಯವರಲ್ಲಿ ನೋಡಬಹುದು.

ಪ್ರಸ್ತುತ ಮುಂಡಗೋಡದಲ್ಲಿ ನೆಲೆಸಿರುವ ಶ್ರೀ ನರೇಶ ಶೆಟ್ಟಿಯವರು ಮಾನ್ವಿತಾ ಸಾಂಸ್ಕೃತಿಕ ಟ್ರಸ್ಟ್ ನ ಸಂಸ್ಥಾಪಕರೂ, ಶ್ರೀ ಆರ್ಯಾದುರ್ಗಾ ದೇವಿ ಪುಸ್ತಕ ಪ್ರಕಾಶನದ ಪ್ರಕಾಶಕರೂ, ಮಾನ್ವಿತಾ ಯೂ ಟ್ಯೂಬ್ ಚಾನಲ್ನ ಸಂಸ್ಥಾಪಕರೂ, ಆಗಿರುತ್ತಾರೆ. ಮಾತ್ರವಲ್ಲ ಮುಂಡಗೋಡದಲ್ಲಿ ವಾಸ್ತವ್ಯವಿರುವ ಕುಂದಾಪುರ ಬಾಂಧವರನ್ನು ಕಲೆಹಾಕಿ 'ಕುಂದಯಕ್ಷ ಸಾಂಸ್ಕೃತಿಕ ವೇದಿಕೆ'ಯನ್ನು ನಿರ್ಮಿಸಿರುವುದು ಕುಂದಾಪುರ ಪರಿಸರ ಹಾಗೂ ಯಕ್ಷಗಾನ ಕಲೆಯ ಮೇಲಿರುವ ಅಪ್ಪಟ ಅಭಿಮಾನಕ್ಕೆ ಕೈಗನ್ನಡಿ ಹಿಡಿದಂತಿದೆ. ಮಿತ್ರರೊಡಗೂಡಿ ಹಲವಾರು ಯಕ್ಷಗಾನ ಕಾರ್ಯಕ್ರಮಗಳನ್ನು ತನ್ನ ಸಂಘಟನಾ ಶಕ್ತಿ ಮತ್ತು ಭಕ್ತಿಯ ಮುಖೇನ ಹಮ್ಮಿಕೊಂಡ , ಸಂಘಟಿಸಿದ ಶ್ರೀ ನರೇಶ ಡಿ. ಶೆಟ್ಟಿಯವರನ್ನು ಯಕ್ಷರಂಗದಲ್ಲಿ ಬಲ್ಲದವರೇ ಇಲ್ಲ ಎಂದರೆ ತಪ್ಪಾಗಲಾರದು.

ಯಕ್ಷರಂಗದ ಕಲಾವಿಧರನ್ನು ಕಾಯಾವಾಚಾಮನಸಾ ಪ್ರೀತಿಸುವುದು ಮಾತ್ರವಲ್ಲದೆಯೇ ತನ್ನ ತುಂಬುಮನದ ಪ್ರೋತ್ಸಾಹವನ್ನು ಅವರಿಗೆ ನೀಡುತ್ತಾ , ತನುಮನಧನದ ಸಂಪೂರ್ಣ ಸಹಕಾರವನ್ನಿತ್ತು ಯಕ್ಷಮಾತೆಯ ಸೇವಾ ಕೈಂಕರ್ಯಕ್ಕೆ ಬದ್ಧರಾಗಿರುವುದು ನಿಜಕ್ಕೂ ಅಭಿಮಾನದ ವಿಷಯ. ಮುಂಡಗೋಡ, ಅಂಕೋಲಾ, ಗೋಕರ್ಣ, ಕುಮಟಾ, ಕಾರವಾರ......ಹೀಗೆ ಬೇರೆ ಬೇರೆ ತಾಲೂಕುಗಳಲ್ಲಿ ಬಚ್ಚಗಾರು ಮೇಳ, ಶಿರಸಿ ಮೇಳ, ಪೆರ್ಡೂರು ಮೇಳ, ಸಾಲಿಗ್ರಾಮ ಮೇಳದವರನ್ನು ಕರೆಯಿಸಿ ಪದ್ಮಪಲ್ಲವಿ, ಚೈತ್ರ ಚಂದನ, ಶೂದ್ರ ತಪಸ್ವಿನಿ, ದಾಮಿನಿ ಭಾಮಿನಿ, ಚಂದ್ರ ಚಕೋರಿ, ಗಂಡುಗಲಿ ಮಯೂರವರ್ಮ, ಸಂಕ್ರಾಂತಿ, ನಾಗವಲ್ಲಿ, ಕೃಷ್ಣಾರ್ಜುನ, ಅಭಿಮನ್ಯು, ಲಂಕಾ ದಹನ, ಮಾರುತಿ ಪ್ರತಾಪ, ದಕ್ಷಯಜ್ಞ, ಸುಧನ್ವಾರ್ಜುನ, ಭಾಗ್ಯಭಾರತಿ, ಸಂಪೂರ್ಣ ಶ್ರೀದೇವಿ ಮಹಾತ್ಮೆ, ಕವಿರತ್ನ ಕಾಳಿದಾಸ........ಹೀಗೆ ವಿವಿಧ ಪ್ರಸಂಗಗಳನ್ನು ಹಮ್ಮಿಕೊಂಡಿರುವುದು ಅವರ ಯಕ್ಷ ಕಲಾಸಕ್ತಿಗೆ ಸಾಕ್ಷಿಯಾಗಿ ನಿಂತಿದೆ.

ಮುಂಡಗೋಡದಲ್ಲಿ ಕಳೆದ ಎರಡು ವರ್ಷಗಳಿಂದ ಶ್ರೀ ಪೆರ್ಡೂರು ಮೇಳದವರಿಂದ ಹಮ್ಮಿಕೊಳ್ಳಲಾದ ಉಚಿತ ಯಕ್ಷಗಾನ ಪ್ರದರ್ಶನ ಜನಮನವನ್ನು ಸೆರೆ ಹಿಡಿದಿಡುವಲ್ಲಿ ಯಶಸ್ಸನ್ನು ಸಾಧಿಸಿದೆ ಎಂಬುದು ನಿಸ್ಸಂಶಯ. ಇತ್ತೀಚೆಗಷ್ಟೇ ಶಿರಸಿಯ ನಕ್ಷೆಯಲ್ಲಿ 'ಶ್ರೀ ಪ್ರಸನ್ನ ದುರ್ಗಿ ಆದಿಶಕ್ತಿ ಮಹಮ್ಮಾಯೆ ಕ್ಷೇತ್ರ ಮಹಾತ್ಮೆ' ಎಂಬ ವೈಶಿಷ್ಟ್ಯ ಪೂರ್ಣ ಸ್ಥಳ ಪುರಾಣವನ್ನೊಳಗೊಂಡ ಯಕ್ಷಗಾನ ಪ್ರಸಂಗವನ್ನು ಬಿಡುಗಡೆಗೊಳಿಸಿದ್ದಾರೆ. ಇವರ ಸಾಹಿತ್ಯಾಸಕ್ತಿ, ಸಾಂಸ್ಕೃತಿಕ ಅನನ್ಯತೆ, ಸಂಘಟನಾ ಚಾತುರ್ಯ ಮತ್ತು ಕಲಾಸಕ್ತಿಯನ್ನು ಗುರುತಿಸಿದ ಹಲವಾರು ಸಂಘ ಸಂಸ್ಥೆಗಳು ಇವರಿಗೆ ಲೆಕ್ಕವಿಲ್ಲದಷ್ಟು ಪ್ರಶಸ್ತಿ ಪುರಸ್ಕಾರವನ್ನಿತ್ತು ಗೌರವಿಸಿವೆ.

ಇವರ ಅಪೂರ್ವ ವಾಕ್ಚಾತುರ್ಯಕ್ಕೆ ಮಣಿದ ಬಹುತೇಕ ವಿದ್ಯಾಸಂಸ್ಥೆಗಳು ಇವರನ್ನು ಹಲವಾರು ವಿದ್ಯಾರ್ಥಿ ಕಾರ್ಯಾಗಾರಗಳಿಗೆ, ವಿಚಾರಸಂಕಿರಣಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಆಹ್ವಾನಿಸಿದೆ. ಯಕ್ಷರಂಗಕ್ಕೆ ಸಂಬಂಧಿಸಿದಂತೆ ಇವರ ಮತ್ತೊಂದು ವೈಶಿಷ್ಟ್ಯಪೂರ್ಣ ಶ್ಲಾಘನೀಯ ಕಾರ್ಯವೈಖರಿ ಯಾವುದೆಂದರೆ ತನ್ನ ಸಂಘಟನೆಯ ಮೂಲಕ ಇವರು ಯಾವುದೇ ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿ , ರಿಕ್ಷಾಪ್ರಚಾರಕ್ಕೆ ಪೂರಕವಾದ ಸಾಹಿತ್ಯ ನಿರೂಪಣೆಯನ್ನು ಸ್ವತಃ ತಾನೇ ಸಿದ್ಧಪಡಿಸುವುದು ಮಾತ್ರವಲ್ಲದೆಯೇ ಕಾರ್ಯಕ್ರಮಕ್ಕೆ ಎರಡು ದಿನ ಮುಂಚಿತವಾಗಿ ಸ್ವತಃ ತಾನೇ ರಿಕ್ಷಾದಲ್ಲಿ ಕುಳಿತು ಹಳ್ಳಿ ಹಳ್ಳಿಗಳಿಗೆ ತಿರುಗಾಟ ನಡೆಸಿ ಮೈಕ್ ಹಿಡಿದು ರಿಕ್ಷಾಪ್ರಚಾರ ಮಾಡುತ್ತಾರೆ. ಇದು ನಿಜಕ್ಕೂ ಇವರು ಯಕ್ಷಪ್ರೇಮಿ ಎನ್ನುವುದನ್ನು ಸಾಬೀತುಪಡಿಸುತ್ತದೆ.

ವೃತ್ತಿಯಲ್ಲಿ ಇವರು ಉದ್ಯಮಿಯಾಗಿದ್ದು , 'ಶ್ರೀ ಸುಮುಖ ಏಜನ್ಸೀಸ್'ನ್ನು ನಡೆಸುತ್ತಿದ್ದಾರೆ. (ಮಿನರಲ್ ವಾಟರ್ ಡಿಸ್ಟ್ರಿಬ್ಯೂಟರ್) ವೃತ್ತಿಯಲ್ಲಿ ಉದ್ಯಮಿಯಾದರೂ ಪೃವೃತ್ತಿಯಲ್ಲಿ ಯಕ್ಷಾಭಿಮಾನಿಯಾಗಿ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆಯೇ ಸರಳ, ಸಜ್ಜನಿಕೆಯ, ಸಹೃದಯ, ಸಹಾಯ ಹಸ್ತ ನೀಡುವ ಶ್ರೀ ನರೇಶ ಡಿ.ಶೆಟ್ಟಿಯವರು ಯಕ್ಷಮಾತೆಯ ಕೃಪಾಶೀರ್ವಾದೊಂದಿಗೆ ಮುನ್ನಡೆಯುತ್ತಿರುವುದು ನಿಜಕ್ಕೂ ಅಭಿನಂದನಾರ್ಹ. ಅತ್ಯುತ್ತಮ ಯಕ್ಷಗಾನ ಸಂಘಟಕರಾದ ಇವರಿಗೆ 'ಯಕ್ಷಮಾತೆ' ಮತ್ತಷ್ಟು ಶಕ್ತಿಸಂಪನ್ನತೆಯನ್ನು ಕೊಟ್ಟು ಕಾಪಾಡಲಿ. ಅವರಿಂದ ಮತ್ತಷ್ಟು ಸೇವಾ ಕೈಂಕರ್ಯಗಳು ನಿರಂತರವಾಗಿ ನೆರವೇರುವ ಮುಖೇನ 'ಯಕ್ಷಮಾತೆ' ಕೀರ್ತಿಯನ್ನು ಪ್ರಾಪ್ತಿಗೊಳಿಸಲಿ ಎಂದು ಹಾರೈಸೋಣ.

ಪ್ರಮುಖ ಪಾತ್ರಗಳು

Founder

Manvita Cultural Trust, Mundagod

Publisher

Sri Aryadurga Devi Book Publication

Founder

Manvita YouTube Channel

Organizer

Kundayaksha Samskrithika Vedike

ಸಾಧನೆಗಳು & ಕೊಡುಗೆಗಳು

Unique Rickshaw Promotion

Personally visits villages on rickshaw with mic to promote Yakshagana programs two days prior — true dedication.

Free Yakshagana Performances

Organized free shows in Mundagod for 2 years with Sri Perduru Mela, capturing public admiration.

Literary Contribution

Released 'Sri Prasanna Durgi Adishakti Mahamaye Kshetra Mahatme' – a unique place-based Yakshagana script.

Numerous Awards & Honors

Recognized by multiple institutions for cultural organizing, literary passion, and art preservation.

ಸಂಪರ್ಕಿಸಿ

Naresh D. Shetty

Founder - Manvita Cultural Trust | Yakshagana Organizer | Publisher


+91 99001 34972, +91 99456 78988
naresh.shetty@manvita.org
Mundagod Taluk, Uttara Kannada, Karnataka - 581349